ಶುಕ್ರವಾರ, ಮಾರ್ಚ್ 27, 2015

ಜಾಣ ಮೊಲ

ಜಾಣ ಮೊಲ

ಒಂದು ಕಾಡಿನಲ್ಲಿ ಒಂದು ಸಿಂಹ ಇತ್ತು. ಅದಕ್ಕೆ ತುಂಬಾ ಹಸಿವಾಗಿ ಕಾಡಿನಲ್ಲಿ ಆಹಾರ ಹುಡುಕಿಕೊಂಡು ಹೋಯಿತು. ದಾರಿಯಲ್ಲಿ ಒಂದು ಮರದ ಕೆಳಗೆ ಒಂದು ಮೊಲ ನಿದ್ದೆ ಮಾಡುತ್ತಾ ಇದ್ದುದನ್ನು ನೋಡಿತು. ಆಗ ಆ ಸಿಂಹ ಆ ಮೂಲವನ್ನು ಹಿಡಿದುಕೊಂಡು "ನಿನ್ನ ತಿಂದು ಬಿಡುತ್ತೇನೆ" ಎಂದಿತು. ಮೊಲಕ್ಕೆ ತುಂಬಾ ಭಯವಾಯಿತು. ಆದಾರೂ ನಿಧಾನವಾಗಿ ಹೇಳಿತು "ಸಿಂಹರಾಜ, ನನ್ನನ್ನು ಬಿಟ್ಟುಬಿಡು. ನಾನು ತುಂಬಾ ಪುಟ್ಟದಾಗಿ ಇದ್ದೇನೆ. ಅಲ್ಲಿ ನೋಡು, ಆ ಜಿಂಕೆ ಎಷ್ಟು ದೊಡ್ಡದಾಗಿದೆ. ಅದನ್ನು ಹಿಡಿದು ತಿಂದರೆ ನಿನ್ನ ಹೊಟ್ಟೆ ತುಂಬುತ್ತದೆ" ಎಂದಿತು. 

ಸಿಂಹ ಜಿಂಕೆಯನ್ನು ನೋಡಿತು. ಮೊಲವನ್ನು ಬಿಟ್ಟು, ಜಿಂಕೆಯನ್ನು ಹಿಡಿಯಲು ಓಡಿತು. ಸಿಂಹವನ್ನು ನೋಡಿ ಜಿಂಕೆ ಚಂಗನೆ ನೆಗೆದು ಪೊದೆಗಳಲ್ಲಿ ನುಗ್ಗಿ ಆ ಸಿಂಹಕ್ಕೆ ಸಿಗದಂತೆ ಓಡಿ ಹೋಯಿತು. ಸಿಂಹಕ್ಕೆ ಜಿಂಕೆ ಸಿಗಲೇ ಇಲ್ಲ. ಅದಕ್ಕೆ ಬೇಜಾರಾಯಿತು. ಮರದ ಕೆಳಗೆ ನೋಡಿದರೆ ಅಲ್ಲಿದ್ದ ಮೊಲ ಕೂಡ ಓಡಿ ಹೋಗಿತ್ತು. 

ಆಗ, ಕೈಗೆ ಸಿಕ್ಕದ್ದನ್ನು ಬಿಟ್ಟೆನಲ್ಲಾ ಎಂದು ಸಿಂಹ ಪೆಚ್ಚಾಯಿತು.